ಪ್ರೀತಂ ಗುಬ್ಬಿ ’99’ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ರೊಂದಿಗೆ ‘ಬಾನ ದಾರಿಯಲಿ’ ಸಿನಿಮಾ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಂತದ ಶೂಟ್ ಮುಗಿಸಿರುವ ಚಿತ್ರ ತಂಡ ಮೂರನೇ ಹಂತದ ಶೂಟ್ ನಲ್ಲಿ ನಿರತವಾಗಿದೆ.
ಪೋಸ್ಟರ್ ಮೂಲಕ ಗಮನ ಸೆಳೆದಿರುವ ಚಿತ್ರದಲ್ಲಿ ಗಣೇಶ್ ಕ್ರಿಕೆಟಿಗನಾಗಿ ಕಾಣಿಸಿಕೊಳ್ಳುತ್ತಿದ್ದು, ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿಯಾಗಿ ಅಭಿನಯಿಸಿದ್ದಾರೆ.
ಮಂಗಳೂರು ಸುತ್ತ ಮುತ್ತ ಚಿತ್ರೀಕರಣ ನಡೆಸಿರುವ ಚಿತ್ರ ತಂಡ ಮೂರನೇ ಹಂತದ ಶೂಟ್ ಗಾಗಿ ಕೀನ್ಯಾಕ್ಕೆ ತೆರಳಿದೆ.
ಕೀನ್ಯಾದಲ್ಲಿ ಶೂಟ್ ಆರಂಭಸಿದ್ದು, ಇದರ ಫೋಟೋಗಳನ್ನು ಗೋಲ್ಡನ್ ಸ್ಟಾರ್ ಗಣೇಶ್ ಹಂಚಿಕೊಂಡಿದ್ದಾರೆ.
ಚಿತ್ರಕ್ಕೆ ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ರೀಶ್ಮಾ ನಾಣಯ್ಯ, ರಂಗಾಯಣ ರಘು ತಾರಾಗಣದಲ್ಲಿದ್ದಾರೆ.

