ಒಬ್ಬ ತಮಿಳಿನ ನಿರ್ದೇಶಕ ತನ್ನದೇ ಚಿತ್ರವನ್ನು ಬೇರೊಂದು ಭಾಷೆಯಲ್ಲಿ ತೆಗೆಯುವುದು ಅಂದರೆ ಅಲ್ಲಿ ಸವಾಲು ನೂರು ಇರುತ್ತವೆ. ಇದೇ ಸವಾಲಿನೊಂದಿಗೆ ‘ಬೈರಾಗಿ’ಯನ್ನು ಇಟ್ಟುಕೊಂಡು ಬಂದ ವಿಜಯ್ ಮಿಲ್ಟನ್ ಪ್ರಯತ್ನಕ್ಕೆ ಮೆಚ್ಚಬೇಕು.
ಹುಲಿ ವೇಷವನ್ನೇ ಬದುಕಾಗಿ ಮಾಡಿಕೊಂಡ ಹುಲಿ ಶಿವಪ್ಪ (ಶಿವರಾಜ್ ಕುಮಾರ್) ಅವರ ಜೀವನದಲ್ಲಿ ಒಂದು ಘಟನೆ ನಡೆದು ಆತ ಜೈಲಿಗೆ ಹೋಗುವ ಸಂದರ್ಭ ಬರುತ್ತದೆ.


ಕಡಲ ಕಿನಾರೆಯ ಹಳ್ಳಿಯಲ್ಲಿರುವ ಕರ್ಣ (ಧನಂಜಯ) ಊರಿಗೆ ಪರೋಪಕಾರಿಯಾಗಿ ಇರುತ್ತಾನೆ. ಒಂದು ಘಳಿಗೆ ಶಿವಪ್ಪ ಹಾಗೂ ಕರ್ಣನ ಎದುರುಬದುರಾಗುವ ಪರಿಸ್ಥಿತಿ ಬರುತ್ತದೆ. ಇದೇ ಈ ಚಿತ್ರದ ಮೂಲ ವಸ್ತು. ಪ್ರೇಕ್ಷಕರಿಗೆ ಇವರಿಬ್ಬರಲ್ಲಿ ಒಳ್ಳೆಯವರು ಯಾರು ಕೆಟ್ಟವರು ಯಾರು ಎನ್ನುವುದನ್ನು ನೋಡಲು ಕಡೆಯವರೆಗೆ ಕುತೂಹಲ ಹುಟ್ಟಿಸುತ್ತಾ ಚಿತ್ರ ಸಾಗುತ್ತದೆ.
ವ್ಯಕ್ತಿತ್ವಕ್ಕೆ ತಕ್ಕಂತೆ ಇಲ್ಲಿ ಪೃಥ್ವಿ ಅಂಬರ್ ಅವರದು ಕರಾವಳಿಯ ಹುಡುಗನ ಪಾತ್ರ ಅವರ ಪಾತ್ರದ ಪ್ರೇಮ ಕಥೆ ಪ್ರೇಕ್ಷಕರನ್ನು ಸೆಳೆಯುತ್ತದೆ ಹಾಗೂ ಮುಖದಲ್ಲಿ ನಗು ತರಿಸುತ್ತದೆ.
ಶಿವರಾಜ್ ಕುಮಾರ್ – ಧನಂಜಯ ಮುಖಾಮುಖಿ ಮತ್ತೊಮ್ಮೆ ಮಾಸ್ ಅಡಿಯನ್ಸ್ ಗಳಲ್ಲಿ ಖುಷಿಯನ್ನು ತರಿಸಿದೆ. ಇಬ್ಬರ ಫೈಟ್ ಸೀನ್ ಗಳಿಗೆ ಗಳಿಗೆ ಚಪ್ಪಾಳೆಯ ಶ್ಲಾಘನೆ ಸಿಗುತ್ತದೆ.
ಇನ್ನೊಂದು ವಿಶೇಷವಂದರೆ ಕಥೆಗೆ ತಕ್ಕಂತೆ ಕರಾವಳಿ ಭಾಗದ ಲೊಕೇಶನ್ ಗಳನ್ನು ಬಳಸಿ ಚಿತ್ರ ನೈಜವಾಗಿ ಮೂಡಿ ಬರುವಂತೆ ಮಾಡಿದ್ದಾರೆ ನಿರ್ದೇಶಕರು. ಸ್ಥಳದಂತೆ ಪಾತ್ರಗಳ ಸ್ಥಳೀಯ ಮಾತುಗಳಿಗೂ ಮಹತ್ವ ಕೊಡಬೇಕಿತ್ತು ಎನ್ನುವುದು ನಮ್ಮ ಅಭಿಪ್ರಾಯ. ಅತ್ಯಾಚಾರದಂತಹ ಗಂಭೀರ ಸಮಸ್ಯೆಗಳ ಬಗ್ಗೆ ಒಂದು ಸಂದೇಶ ಚಿತ್ರ ನೀಡುತ್ತದೆ.
ಆದನೇ ಇರಲಿ.. ಸಣ್ಣ ಪುಟ್ಟ ಕೊರತೆಗಳನ್ನು ಬದಿಗಿಟ್ಟರೆ ‘ಬೈರಾಗಿ’ ಪಕ್ಕಾ ಮಾಸ್ ಸಿನಿಮಾ.



