ರೋರಿಂಗ್ ಸ್ಟಾರ್ ಶ್ರೀಮರಳಿ ಅವರ ಬಹು ನಿರೀಕ್ಷಿತ ‘ಬಘೀರ’ ಸಿನಿಮಾದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದೆ. ಸಿನಿಮಾದ ಶೂಟಿಂಗ್ ಬಗ್ಗೆ ಸದ್ದು ಆಗುತ್ತಿರುವ ಬೆನ್ನಲ್ಲೇ ಸಿನಿಮಾದಲ್ಲಿ ನಾಯಕಿ ಯಾರಾಗಿರಬಹುದು ಎನ್ನುವ ಕುತೂಹಲ ಇತ್ತು.
ಈಗ ನಾಯಕಿಯ ಆಯ್ಕೆ ಮಾಡಿಕೊಂಡಿದ್ದು ಕುತೂಹಲಕ್ಕೆ ತೆರೆ ಬಿದ್ದಿದೆ. ರುಕ್ಮಿಣಿ ವಸಂತ್ ‘ಬಘೀರ’ನಿಗೆ ನಾಯಕಿಯಾಗಲಿದ್ದಾರೆ.
ಈ ಹಿಂದೆ ಶ್ರೀನಿ ನಿರ್ದೇಶನದ “ಬೀರ್‌ಬಲ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ಸದ್ಯ ರಕ್ಷಿತ್ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ “ಬಾನದಾರಿಯಲ್ಲಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ರುಕ್ಮಿಣಿ ವಸಂತ್ “ಬಘೀರ’ನಿಗೆ ನಾಯಕಿಯಾಗಿದ್ದಾರೆ. ಈ ಮೂಲಕ ರುಕ್ಮಿಣಿಗೆ ಮತ್ತೂಂದು ದೊಡ್ಡ ಅವಕಾಶ ಸಿಕ್ಕಂತಾಗಿದೆ.
ಯಾವ ರುಕ್ಮಿಣಿ ಎಂದು ನೀವು ಕೇಳಬಹುದು. ಈ ಹಿಂದೆ ಶ್ರೀನಿ ನಿರ್ದೇಶನದ “ಬೀರ್‌ಬಲ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ಸದ್ಯ ರಕ್ಷಿತ್ ಶೆಟ್ಟಿ ನಟನೆಯ “ಸಪ್ತಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ “ಬಾನದಾರಿಯಲ್ಲಿ’ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ.
ಡಾ.ಸೂರಿ ನಿರ್ದೇಶನ ಮಾಡುತ್ತಿರುವ ‘ಬಘೀರ’ ಸಿನಿಮಾಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.

