ಸೂರಿ ನಿರ್ದೇಶನದ ʼಬ್ಯಾಡ್ ಮ್ಯಾನರ್ಸ್ʼ ಚಿತ್ರದಲ್ಲಿ ಜೂ. ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ವಿಷಯ ಗೊತ್ತೇ ಇದೆ. ಈಗ ಚಿತ್ರ ರಿಲೀಸ್ ಹತ್ತಿರವಾಗುತ್ತಿದೆ.


ದುನಿಯಾ ಸೂರಿ ಅವರೊಂದಿಗೆ ಮೊದಲ ಬಾರಿ ಕೆಲಸ ಮಾಡುತ್ತಿರುವ ಅಭಿಷೇಕ್ ಅಂಬರೀಷ್ ʼಬ್ಯಾಡ್ ಮ್ಯಾನರ್ಸ್ʼ ಗಾಗಿ ಸಾಕಷ್ಟು ತಯಾರಾಗಿ ಪಳಗಿಕೊಂಡಿದ್ದಾರೆ. ಅವರ ನಟನೆಯ ಸ್ಕಿಲ್ ಕೂಡ ಇದರಲ್ಲಿ ಎದ್ದು ಕಾಣುತ್ತದೆ.


ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇದೀಗ ಚಿತ್ರದ ಡಬ್ಬಿಂಗ್ ಹಾಗೂ ಪೋಸ್ಟ್ ಪ್ರೂಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದೆ.
ಜೂ. ರೆಬಲ್ ಸ್ಟಾರ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೊಡುತ್ತಿರುವ ವಿಡಿಯೋವನ್ನು ಚಿತ್ರ ತಂಡ ಹೊರ ಬಿಟ್ಟಿದೆ. ಇದೊಂದು ಕಮರ್ಷಿಯಲ್ ಕಥಾ ಹಂದರವುಳ್ಳ ಚಿತ್ರವಾಗಿರಲಿದೆ.
ಚರಣ್ ರಾಜ್ ಅವರ ಮ್ಯೂಸಿಕ್, ಶೇಖರ್ ಅವರ ಛಾಯಗ್ರಹಣ ಚಿತ್ರಕ್ಕಿದೆ. ರಚಿತಾ ರಾಮ್, ಪ್ರಿಯಾಂಕ ಕುಮಾರ್ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.



