ಬ್ರಿಸ್ಬೇನ್ : ಐಪಿಎಲ್ ನಲ್ಲಿ ತನ್ನ ಬೌಲಿಂಗ್ ನಲ್ಲಿ ಮಿಂಚಿದ ಯುವ ವೇಗಿಗಳಾದ ಚೇತನ್ ಸಕಾರಿಯಾ ಹಾಗೂ ಮುಕೇಶ್ ಚೌಧರಿ ವಿದೇಶದಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ ಮುಕೇಶ್ ಚೌಧರಿ,ಡೆಲ್ಲಿ ಪರವಾಗಿ ಆಡಿದ ಚೇತನ್ ಸಕಾರಿಯಾ ಐಪಿಎಲ್ ನಲ್ಲಿ ಯುವ ವೇಗಿಗಳಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಪೇಸ್ ಗಳಿಂದಲೇ ಮಿಂಚಿರುವ ಈ ಇಬ್ಬರು ಆಟಗಾರರು ಇದೀಗ ವಿದೇಶದಲ್ಲಿ ಆಡಲು ಅವಕಾಶ ಅವಕಾಶ ಪಡೆದುಕೊಂಡಿದ್ದಾರೆ.


ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಉದ್ಘಾಟನಾ ಆವೃತ್ತಿಯ ಟಿ20 ಮ್ಯಾಕ್ಸ್ ಟೂರ್ನಿಯಲ್ಲಿ ಆಡಲು ಬಿಸಿಸಿಐ ಈ ಇಬ್ಬರು ಆಟಗಾರರಿಗೆ ಅನುಮತಿ ನೀಡಿದೆ.
ಮುಂದಿನ ತಿಂಗಳು ಟೂರ್ನಿ ಆರಂಭಗೊಳ್ಳಲಿದ್ದು, ಸಕಾರಿಯಾ ಸನ್ ಶೈನ್ ಕೋಸ್ಟ್ ತಂಡದ ಪರವಾಗಿ ಆಡಲಿದ್ದಾರೆ. ಮುಕೇಶ್ ವೈನ್ನಮ್ ಮ್ಯಾನ್ಲಿ ತಂಡದಲ್ಲಿ ಆಡಲಿದ್ದಾರೆ.
ಎಂಆರ್ ಎಫ್ ಫೇಸ್ ಫೌಂಡೇಶನ್ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಸಹಭಾಗಿತ್ವದಲ್ಲಿ ಈ ಟೂರ್ನಿ ನಡೆಯಲಿದೆ.

