HomeExclusive News"ಅಟ್ಲಿ" ಗೆ ಸಾಥ್ ಕೊಟ್ಟ ರಿಷಬ್ ಶೆಟ್ಟಿ: ಅ.27 ರಿಂದ ಶೂಟಿಂಗ್ ಸ್ಟಾರ್ಟ್

“ಅಟ್ಲಿ” ಗೆ ಸಾಥ್ ಕೊಟ್ಟ ರಿಷಬ್ ಶೆಟ್ಟಿ: ಅ.27 ರಿಂದ ಶೂಟಿಂಗ್ ಸ್ಟಾರ್ಟ್

ಚಂದನವನದಲ್ಲಿ ವಿಭಿನ್ನ‌ ಕಥಾಹಂದರದ ಚಿತ್ರಗಳು ಬರುತ್ತಿವೆ. ಈ ಸಾಲಿಗೆ ಈಗ ರಂಗನಾಥ್ ನಿರ್ದೇಶನದ “ಅಟ್ಲಿ” ಚಿತ್ರ ಸೇರಿದೆ.

“ಅಟ್ಲಿ” ಟೈಟಲ್ ಪೋಸ್ಟರನ್ನು ನಿರ್ದೇಶಕ, ನಟ ರಿಷಬ್ ಶೆಟ್ಟಿ ಅವರು ಬಿಡುಗಡೆ ಮಾಡಿ, ಚಿತ್ರ ತಂಡಕ್ಕೆ ಶುಭಕೋರಿದರು. ಇದಲ್ಲದೆ ಇತ್ತೀಚಿಗೆ ಲಾಂಛನವನ್ನು ಶ್ರೀ ಸಿದ್ದಗಂಗಾ ಮಠದ ಶ್ರೀಗಳು ಅನಾವರಣಗೊಳಿಸಿದರು.


ಈ “ಅರಿವು”, ”ಪ್ರಭುತ್ವ” ಚಿತ್ರಗಳನ್ನು ‌ಮಾಡಿದ್ದ ರಂಗನಾಥ್ ಅವರಿಗೆ ಇದು ಮೂರನೇ ಚಿತ್ರ. ಈ ಸಿನಿಮಾವನ್ನು ಆರ್ ಜಿ ವಿ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ.


ಇದೇ 27ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ತುಮಕೂರಿನ ಶ್ರೀಸಿದ್ದಗಂಗಾ ಮಠದಲ್ಲಿ ಮೂರುದಿನಗಳ ಚಿತ್ರೀಕರಣ ನಡೆಯಲಿದೆ.

“ಅಟ್ಲಿ” ಯಲ್ಲಿ ಲವ್, ಪೊಲಿಟಿಕಲ್ ಡ್ರಾಮ ಇರಲಿದೆ. ಒಟ್ಟು 60 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಯಲಿದೆ.


ಪೂಜಾ ಜನಾರ್ದನ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಕೆ.ಜಿ.ಎಫ್
ಅನ್ ಮೋಲ್, ಶೃತಿ, ಅಭಿಜಿತ್, ಅತುಲ್ ಕುಲಕರ್ಣಿ, ರವಿಕಾಳೆ, ನಾಜರ್, ಸುಪ್ರೀತ್, ಮನು ಮಯೂರ,ಲಲಿತಾ ತಾರಾಬಳಗದಲ್ಲಿದ್ದಾರೆ.


ಚಿತ್ರದ ಮೂರು ಹಾಡುಗಳನ್ನು ಯೋಗರಾಜ್ ಭಟ್, ಡಾ|ವಿ.ನಾಗೇಂದ್ರಪ್ರಸಾದ್ ಹಾಗೂ ಬಹದ್ದೂರ್ ಚೇತನ್ ಕುಮಾರ್ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಕೆ.ಎಸ್ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ವಿನೋದ್ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಮೂರ್ತಿ ಸಂಭಾಷಣೆ ಬರೆದಿದ್ದಾರೆ.

RELATED ARTICLES

Most Popular

Share via
Copy link
Powered by Social Snap