ಚುಟುಕು ಕ್ರಿಕೆಟ್ ಹಬ್ಬವೆಂದೇ ಖ್ಯಾತಿಯಾಗಿರುವ ಏಷ್ಯಾ ರಾಷ್ಟ್ರಗಳ ಕ್ರಿಕೆಟ್ ಕೂಟ ಏಷ್ಯಾ ಕಪ್ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ.
ನಿಗದಿಯಂತೆ ಈ ಬಾರಿಯ ಟೂರ್ನಮೆಂಟ್ ಶ್ರೀಲಂಕಾದಲ್ಲಿ ನಡೆಯಲಿತ್ತು. ಆದರೆ ಶ್ರೀಲಂಕಾದ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿ ಏಷ್ಯಾ ಕಪ್ ನಂತಹ ಟೂರ್ನಮೆಂಟ್ ನಡೆಸೋದು ಸ್ವಲ್ಪ ರಿಸ್ಕಿಯೇ.


ಬುಧವಾರ ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಏಷ್ಯಾ ಕಪ್ ನಡೆಸುವ ಆಯ್ಕೆಗಳನ್ನು ಚರ್ಚಿಸಿದ್ದಾರೆ. ಇದಕ್ಕೂ ಮೊದಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಏಷಿಯನ್ ಕ್ರಿಕೆಟ್ ಕೌನ್ಸಿಲ್ ಗೆ ಸದ್ಯದ ಪರಿಸ್ಥಿತಿಯಲ್ಲಿ ಈ ಬಾರಿಯ ಏಷ್ಯಾ ಕಪ್ ಶ್ರೀಲಂಕಾದಲ್ಲಿ ನಡೆಸುವುದು ಕಷ್ಟವೆಂದು ಹೇಳಿದೆ.
ಮುಂಬಯಿಯಲ್ಲಿ ನಡೆದ ಅಪೆಕ್ಸ್ ಸಭೆಯ ಬಳಿಕ ಸೌರವ್ ಗಂಗೂಲಿ ಮಾತಾನಾಡಿ, ಮಳೆ ಹಾಗೂ ಬೇರೆ ಯಾವುದೇ ಭಯವಿಲ್ಲದೆ ಯುಎಇ ನಲ್ಲಿ ಮಾತ್ರ ಏಷ್ಯಾ ಕಪ್ ನಡೆಸಲು ಸಾಧ್ಯವೆಂದು ಹೇಳಿದ್ದಾರೆ.
ಭಾರತ, ಪಾಕಿಸ್ತಾನ, ಶ್ರೀಲಂಕಾ,ಬಾಂಗ್ಲಾದೇಶ, ಅಪಘಾನಿಸ್ತಾನ ತಂಡಗಳು ಏಷ್ಯಾ ಕಪ್ ನ ಪ್ರಧಾನ ತಂಡಗಳು.

