HomeSportsಸನ್ನಿಹಿತವಾಗುತ್ತಿದೆ 'ಏಷ್ಯಾ ಕಪ್'! ಟೀಂ ಇಂಡಿಯಾದ ಪ್ರಮುಖ ಆಟಗಾರರು ಇವರೇ!

ಸನ್ನಿಹಿತವಾಗುತ್ತಿದೆ ‘ಏಷ್ಯಾ ಕಪ್’! ಟೀಂ ಇಂಡಿಯಾದ ಪ್ರಮುಖ ಆಟಗಾರರು ಇವರೇ!

ಕ್ರಿಕೆಟ್ ಪ್ರೇಮಿಗಳಿಗೆ ಪ್ರಸ್ತುತ ಅತ್ಯಂತ ಸಂತೃಪ್ತಿದಾಯಕ ಕಾಲ. ಪ್ರತಿದಿನ ನೋಡಲು ಒಂದಲ್ಲ ಒಂದು ಕ್ರಿಕೆಟ್ ಪಂದ್ಯಾಟ ನಡೆಯುತ್ತಲೇ ಇದೆ. ಒಂದೆಡೆ ಆಶೆಸ್ ನಡೆಯುತ್ತಿದೆ. ಈ ತಿಂಗಳ ಅಂತ್ಯದಲ್ಲಿ ಏಕದಿನ ವಿಶ್ವಕಪ್ ಕೂಡ ಸರಣಿ ಮಟ್ಟದಲ್ಲಿ ಪಾಲ್ಗೊಳ್ಳಲಿದೆ. ಈಗಾಗಲೇ ಜಿಂಬಾಬ್ವೆಯಲ್ಲಿ ವರ್ಲ್ಡ್ ಕಪ್ ನ ಕ್ವಾಲಿಫಯರ್ ಪಂದ್ಯಗಳು ನಡೆಯುತ್ತಲಿವೆ. ಈ ಬಾರಿಯ ಏಕದಿನ ಪಂದ್ಯವನ್ನ ಭಾರತ ತನ್ನ ಮಣ್ಣಿನ ಮೇಲೆ ನಡೆಸಲಿದೆ. ಇದೆಲ್ಲದರ ನಂತರ ಆಗಸ್ಟ್ 31ರಿಂದ ಏಷ್ಯಾ ಕಪ್ ಪ್ರಾರಂಭವಾಗಲಿದೆ. ಪಾಕಿಸ್ತಾನ ಹಾಗು ಶ್ರೀ ಲಂಕಾ ನೆಲದಲ್ಲಿ ನಡೆಯಲಿರುವ ಈ ಏಷ್ಯಾ ಕಪ್ ಪಂದ್ಯಾಟಗಳ ಮೇಲೆ ಭಾರತೀಯ ಕ್ರಿಕೆಟ್ ತಂಡ ಹಾಗು ಕ್ರಿಕೆಟ್ ಪ್ರೇಮಿಗಳು ಕಣ್ಣಿಟ್ಟಿದ್ದಾರೆ. ಪರಿಣಿತರ ಪ್ರಕಾರ ನಮ್ಮ ಭಾರತೀಯ ತಂಡದ ಇಬ್ಬರೂ ಆಟಗಾರರು ಈ ಸಾಲಿನ ಏಷ್ಯಾ ಕಪ್ ಗೆ ನಮ್ಮಲ್ಲಿನ ಪ್ರಮುಖ ಆಟಗಾರರಾಗಿರಲಿದ್ದಾರೆ. ಯಾರವರು?

ಭಾರತ ತಂಡ ಈಗಷ್ಟೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಅನ್ನು ಕಳೆದುಕೊಂಡ ಬೇಸರದಲ್ಲಿದೆ. ಆದರೂ ಮುಂದಿನ ಸರಣಿಗಳಿಗೆ ತಯಾರಿ ಸಾಗುತ್ತಲೇ ಇದೇ. ಏಕದಿನ ವಿಶ್ವಕಪ್ ನ ನಂತರ ನಡೆಯಲಿರುವ ಏಷ್ಯಾ ಕಪ್ ಕೂಡ 50 ಓವರ್ ಗಳಲ್ಲೇ ನಡೆಯಲಿದೆ ಎನ್ನಲಾಗುತ್ತಿದೆ. ಇನ್ನೇನು ಸನ್ನಿತವಾಗುತ್ತಿರುವ ಏಷ್ಯಾ ಕಪ್ ಗೆ ನಮ್ಮಲ್ಲಿನ ಕ್ರಿಕೆಟ್ ಪರಿಣಿತರ ಪ್ರಕಾರ ಸೂರ್ಯಕುಮಾರ್ ಯಾದವ್ ಹಾಗು ಹಾರ್ದಿಕ್ ಪಾಂಡ್ಯ ಈ ಇಬ್ಬರು ಪ್ರಮುಖರಾಗಿರಲಿದ್ದಾರೆ. ಇವರಿಬ್ಬರ ಉತ್ತಮ ಪ್ರದರ್ಶನದಿಂದ ಒಂದಿಡೀ ಪಂದ್ಯವನ್ನೇ ನಮ್ಮತ್ತ ತಿರುಗಿಸಿಕೊಳ್ಳಬಹುದು ಎಂಬುದು ಪರಿಣಿತರ ಅಭಿಪ್ರಾಯ.

ಭಾರತದ ಮಿಸ್ಟರ್ 360° ಎಂದೇ ಕರೆಸಿಕೊಳ್ಳುವ ಸೂರ್ಯಕುಮಾರ್ ಯಾದವ್ ಅವರು, ಸದ್ಯ ಭಾರತ ತಂಡದ ಯಶಸ್ವಿ ಆಟಗಾರರಲ್ಲಿ ಒಬ್ಬರು. ಸೌತ್ ಆಫ್ರಿಕಾ ಸ್ಟಾರ್ ಆಟಗಾರ ಎಬಿಡಿ ವಿಲಿಯರ್ಸ್ ಅವರಿಗೆ ನಮ್ಮ ಸೂರ್ಯಕುಮಾರ್ ಯಾದವ್ ಅವರನ್ನ ಹೋಲಿಕೆ ಮಾಡಿ ಹೊಗಳಲಾಗುತ್ತಿದೆ. ತಮ್ಮ ಆಕರ್ಷಕ ಬ್ಯಾಟಿಂಗ್ ಶೈಲಿ, ಜೊತೆಗೆ ರಭಸವಾಗಿ ಆಡುವ ಸೂರ್ಯ ಅವರು ಪಂದ್ಯದ ಗತಿಯನ್ನ ಬದಲಿಸಬಲ್ಲರು. ಈಗಾಗಲೇ ತಮ್ಮ ಬ್ಯಾಟಿಂಗ್ ನ ಮೂಲಕ ನಮ್ಮ ಭಾರತೀಯ ತಂಡ ಹಲವು ಪಂದ್ಯಗಳನ್ನ ಗೆಲ್ಲುವಲ್ಲಿ ಸಹಾಯ ಮಾಡಿರುವ ಸೂರ್ಯ ಅವರಿಂದ ಏಷ್ಯಾ ಕಪ್ ನಲ್ಲಿ ಕೂಡ ಉತ್ತಮ ಪ್ರದರ್ಶನವನ್ನ ನಿರೀಕ್ಷೆ ಮಾಡಲಾಗುತ್ತಿದೆ.

ಇನ್ನು ನಮ್ಮ ತಂಡದ ಮತ್ತೊಬ್ಬ ಪ್ರಮುಖ ಆಟಗಾರರೆಂದರೆ ಅದು ಹಾರ್ದಿಕ್ ಪಾಂಡ್ಯ ಅವರು. ಕೆಲಕಾಲ ತಮ್ಮ ದೈಹಿಕ ಸಮಸ್ಯೆಯ ಕಾರಣ ಕ್ರಿಕೆಟ್ ನಿಂದ ದೂರ ಉಳಿದಿದ್ದ ಹಾರ್ದಿಕ್, ಇದೀಗ ಭಾರತೀಯ ತಂಡದಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಐಪಿಎಲ್, ಜೊತೆಗೆ ಅಂತರ್ರಾಷ್ಟ್ರೀಯ ಪಂದ್ಯಗಳಲಿ ಕೂಡ ಹಾರ್ದಿಕ್ ಪಾಂಡ್ಯ ಅವರ ಪ್ರಭುದ್ಧ ಕ್ರಿಕೆಟ್ ನಡೆಯುತ್ತಲೇ ಬಂದಿದೆ. ಬ್ಯಾಟಿಂಗ್ ಹಾಗು ಬೌಲಿಂಗ್ ಎರಡನ್ನು ಉತ್ತಮವಾಗಿ ಮಾಡಬಲ್ಲ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ಈ ಸಾಲಿನ ಏಷ್ಯಾ ಕಪ್ ನಲ್ಲಿ ಉತ್ತಮ ಪ್ರದರ್ಶನವನ್ನ ನಿರೀಕ್ಷೆಸುತ್ತಿದ್ದಾರೆ ಕ್ರಿಕೆಟ್ ಪ್ರೇಮಿಗಳು.

RELATED ARTICLES

Most Popular

Share via
Copy link
Powered by Social Snap