

‘ರಾಮಾ ರಾಮಾ ರೇ’, ‘ಒಂದಲ್ಲ ಎರಡಲ್ಲ, ‘ಮ್ಯಾನ್ ಆಫ್ ದಿ ಮ್ಯಾಚ್’ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡ ಸೂತ್ರಧಾರ ಡಿ. ಸತ್ಯ ಪ್ರಕಾಶ್ ಇದೀಗ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
‘ಮಯೂರ ಪಿಕ್ಚರ್ಸ್’ ಹಾಗೂ ಡಿ. ಮಂಜುನಾಥ್ ಜೊತೆಗೂಡಿ ನಿರ್ಮಾಣ ಮಾಡಲಿರುವ ಚಿತ್ರದ ಟೈಟಲ್ ನಾಳೆ ರಿವೀಲ್ ಆಗಲಿದೆ.
‘ಲವ್ ಮಾಕ್ಟೇಲ್- 2’ ನಿಂದ ಜನಪ್ರಿಯ ಪಡೆದ ರೆಚೆಲ್ ಡೇವಿಡ್, ‘ವೀಕೆಂಡ್’ ಖ್ಯಾತಿಯ ಮಿಲಿಂದ್ ಜತೆಯಾಗಿ ಚಿತ್ರದಲ್ಲಿ ನಟಿಸಲಿದ್ದಾರೆ. ಡಿ. ಸತ್ಯ ಪ್ರಕಾಶ್ ನಿರ್ಮಾಣದೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.


ಚಿತ್ರದ ಹೊಸ ಅಪ್ಡೇಟ್ ಎಂದರೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ನಾಳೆ ಬೆಳಗ್ಗೆ 10 ಗಂಟೆಗೆ ಚಿತ್ರದ ಟೈಟಲ್ ಪೋಸ್ಟರನ್ನು ರಿವೀಲ್ ಮಾಡಲಿದ್ದಾರೆ.
ಭಾಗ್ಯ ರಾಜ್’, ‘ರಾಜು ಜೇಮ್ಸ್ ಬಾಂಡ್’, ‘ಕಳ್ಬೆಟ್ಟದ ದರೋಡೆಕೋರರು’ ಸಿನಿಮಾ ನಿರ್ದೇಶನ ಮಾಡಿದ್ದ ದೀಪಕ್ ಮಧುವನಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಇದೊಂದು ರೊಮ್ಯಾಂಟಿಕ್ ಕಾಮಿಡಿ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರವಾಗಿರಲಿದೆ.



