ಸ್ಯಾಂಡಲ್ ವುಡ್ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಚಂದನವನದಲ್ಲಿ ಮಿಂಚು ಹರಿಸಿದ ಬಳಿಕ ಇದೀಗ ಟಾಲಿವುಡ್ ರಂಗದಲ್ಲಿ ಶೈನ್ ಆಗಲು ರೆಡಿಯಾಗಿದ್ದಾರೆ.
ನವ ನಿರ್ದೇಶಕ ರಾಜೇಂದ್ರ ರೆಡ್ಡಿ ಅವರ ‘ಅಮಿಗೋಸ್’ ಎನ್ನುವ ಚಿತ್ರದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ
ನಂದಮೂರಿ ಕಲ್ಯಾಣ್ ರಾಮ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.
ನಾಯಕಿಯಾಗಿ ಆಶಿಕಾ ಕಾಣಿಸಿಕೊಳ್ಳುವುದರ ಜೊತೆಗೆ ಸಿನಿಮಾದ ಹಾಡೊಂದರಲ್ಲಿ ಆಶಿಕಾ ಹಾಟ್ ಆಗಿ ಕಾಣಿಸಿಕೊಂಡಿದ್ದು, ಹಾಡು ಸದ್ದು ಮಾಡುತ್ತಿದೆ.
“ಎನ್ನೋ ರಾತ್ರುಲೊಸ್ತಾಯಿ” ಎನ್ನುವ ಹಾಡಿನಲ್ಲಿ ಆಶಿಕಾ ಹಾಟ್ ಅವತಾರದಲ್ಲಿ ನಾಯಕನ ಜೊತೆ ಕಾಣಿಸಿಕೊಂಡಿದ್ದಾರೆ. ಅವರ ರೊಮ್ಯಾಂಟಿಕ್ ಸೀನ್ ಗಳು ಪಡ್ಡೆ ಹುಡುಗರ ನಿದ್ರೆ ಕದ್ದಿದೆ.
ರಿಲೀಸ್ ಆದ ಒಂದೇ ದಿನದಲ್ಲಿ ಹಾಡು 2.1 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ಸಿನಿಮಾ ಫೆ.10 ರಂದು ರಿಲೀಸ್ ಆಗಲಿದೆ.

