ಕಿಂಗ್ ಖಾನ್ ಶಾರುಖ್ ‘ಪಠಾಣ್’ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಬಹು ಸಮಯದ ಬಳಿಕ ಬಣ್ಣದ ಲೋಕಕ್ಕೆ ಬರುತ್ತಿರುವುದರಿಂದ ಕಿಂಗ್ ಖಾನ್ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಡ್ರಗ್ಸ್ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಶಾರುಖ್ ಪುತ್ರ ಆರ್ಯನ್ ಖಾನ್ ಕಹಿ ಘಟನೆಯನ್ನು ಮರೆತು ಮುಂದೆ ಸಾಗಿದ್ದಾರೆ. ಅವರು ಚಿತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿಗಳು ಹಬ್ಬಿತ್ತು. ಈ ಬಗ್ಗೆ ಈಗ ಹೊಸ ಮಾಹಿತಿ ಹೊರ ಬಿದ್ದಿದೆ.
ಆರ್ಯನ್ ಖಾನ್ ನಟನಾಗಿ ಬರುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ ಎಲ್ಲರಿಗೆ ಆರ್ಯನ್ ಆಶ್ಚರ್ಯ ಮೂಡಿಸಿದ್ದಾರೆ. ಅವರು ನಿರ್ದೇಶಕನಾಗಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಈ ಕುರಿತು ಫೋಟೋ ಹಂಚಿಕೊಂಡಿರುವ ಆರ್ಯನ್ ಖಾನ್ ಸ್ಕ್ರಿಪ್ಟ್ ಬರೆದಾಯಿತು. ಆಕ್ಷನ್ ಕಟ್ ಹೇಳಲು ಕಾಯುತ್ತಿದ್ದಾರೆ ಎಂದಿದ್ದಾರೆ.
ಈ ಬಿಟೌನ್ ನಲ್ಲಿ ಸದ್ದು ಮಾಡುತ್ತಿದ್ದು ಚೊಚ್ಚಲ ಬಾರಿ ನಿರ್ದೇಶಕ್ಕಿಳಿಯಲಿರುವ ಆರ್ಯನ್ ಖಾನ್ ಅವರಿಗೆ ತಂದೆ ಶಾರುಖ್, ತಾಯಿ ಗೌರಿ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಶುಭಕೋರಿದ್ದಾರೆ.

