HomeNewsಹೊಂದಿಸಿ ಬರೆಯಿರಿ ಮಿಂಚುತ್ತಿರುವ ಕಿರುತೆರೆಯ ತ್ರಿಪುರ ಸುಂದರಿ

ಹೊಂದಿಸಿ ಬರೆಯಿರಿ ಮಿಂಚುತ್ತಿರುವ ಕಿರುತೆರೆಯ ತ್ರಿಪುರ ಸುಂದರಿ

ಕಿರುತೆರೆ ಮೂಲಕ ಹಿರಿತರೆಗೆ ಕಾಲಿಟ್ಟ ನಟಿ ಅರ್ಚನಾ ಜೋಯಿಸ್ ಕೆಜಿಎಫ್ ಚಿತ್ರದಲ್ಲಿ ನಟ ಯಶ್ ತಾಯಿಯಾಗಿ ಅಭಿನಯಿಸಿ ಎಲ್ಲರ ಮನೆಗೆದ್ದಿದ್ದರು. ಇದೀಗ ರಾಮೇನಹಳ್ಳಿ ಜಗನ್ನಾಥ್ ಅವರ ನಿರ್ದೇಶನದ ‘ಹೊಂದಿಸಿ ಬರೆಯಿರಿ’ ಚಿತ್ರದಲ್ಲಿ ಅದ್ಭುತವಾಗಿ ನಟಿಸಿ ತಮ್ಮ ಅಭಿನಯ ಸಾಮರ್ಥ್ಯವನ್ನು ತೋರಿಸಿದ್ದಾರೆ. ಪಲ್ಲವಿ ಎಂಬ ಪಾತ್ರವನ್ನು ಮಾಡಿರುವ ನಟಿ ಅರ್ಚನಾ ಜೋಯಿಸ್ ಗುಲ್ಟು ಚಿತ್ರದ ನಟ ನವೀನ ಶಂಕರ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರ ಹಾಗೂ ಅದರ ನಿರ್ದೇಶಕರ ಬಗ್ಗೆ ಮಾತನಾಡಿದ ಅರ್ಚನ ಜೋಯಿಸವರು “ನನಗೆ ಚಿತ್ರಕಥೆ ಕೇಳುತ್ತಿದ್ದಂತೆಯೇ ಈ ಪಾತ್ರವನ್ನು ಮಾಡಲೇಬೇಕೆಂಬ ಆಸೆ ಆಯ್ತು. ನಿರ್ದೇಶಕರು ತಮ್ಮ ಚಿತ್ರಕಥೆಯಲ್ಲಿ ಬಹಳ ಕ್ಲಿಯರ್ ಆಗಿದ್ದರು. ಇಷ್ಟು ಸ್ಪಷ್ಟವಾಗಿ ಚಿತ್ರಣವನ್ನು ಕೊಟ್ಟಂತಹ ಬೇರೆ ಯಾರನ್ನು ನಾನು ಇದುವರೆಗೂ ಕಂಡಿಲ್ಲ. ನಿರ್ದೇಶಕರ ಕ್ಲಾರಿಟಿ ಹಾಗು ಡೆಡಿಕೇಶನ್ ನನಗೆ ಈ ಚಿತ್ರವನ್ನು ಮಾಡಲೇಬೇಕೆಂಬ ಆಸೆಯನ್ನು ದೃಢಪಡಿಸಿತು” ಎಂದಿದ್ದಾರೆ.

“ಪಲ್ಲವಿ ಎಂಬ ಪಾತ್ರ ಬಹಳ ಪ್ರೌಢವಾಗಿ ಮೂಡಿಬಂದಿದೆ. ನನಗೆ ಅದರ ಇಡೀ ಅಂಶ ತುಂಬಾ ಹಿಡಿಸಿತು. ಐದು ಜನ ಸ್ನೇಹಿತರೊಂದಿಗೆ ಆರಂಭವಾಗುವ ಈ ಕಥೆ ಬಹಳಷ್ಟು ಅಂಶಗಳನ್ನು ಒಳಗೊಂಡಿದ್ದು ಪ್ರೇಕ್ಷಕರು ತಮ್ಮ ನಿಜ ಜೀವನವನ್ನು ಒಂದಾನೊಂದು ಪಾತ್ರದಲ್ಲಿ ಕಂಡುಕೊಳ್ಳಬಹುದಾಗಿದೆ. ಪಾತ್ರಗಳ ಜೀವನದ ಜೊತೆಯೇ ಕಥೆ ಮುಂದುವರೆಯುತ್ತದೆ. ನಾನು ಈ ಚಿತ್ರದಲ್ಲಿ ಸ್ವಲ್ಪ ನಿಧಾನವಾಗಿ ಕಾಣಿಸಿಕೊಳ್ಳಲಿದ್ದೇನೆ. ಹೇಗೆ ಪ್ರತಿಯೊಬ್ಬರ ಜೀವನದಲ್ಲೂ ನಿರೀಕ್ಷೆಗಳು ಹಾಗೂ ವಾಸ್ತವತೆ ಬದಲಾಗಿರುತ್ತದೆ ಎಂಬುದು ಈ ಚಿತ್ರದ ಮುಖ್ಯ ಅಂಶವಾಗಿದೆ” ಎಂದು ಚಿತ್ರದ ಬಗ್ಗೆ ಮಾತನಾಡಿದ್ದಾರೆ ನಟಿ ಅರ್ಚನಾ ಜೋಯಿಸ್.

ಕೆಜಿಎಫ್ ಚಿತ್ರದ ನಂತರ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಅರ್ಚನಾ ಅವರು “ನನಗೆ ಕೆಜಿಎಫ್ ನಲ್ಲಿ ಸಿಕ್ಕಿರುವಂತಹ ಬಾಂಧವ್ಯವೇ ಇಲ್ಲಿಯೂ ದೊರಕಿತು. ಇಲ್ಲಿ ನಾವೆಲ್ಲರೂ ಸ್ನೇಹಿತರಂತೆ ಇದ್ದೆವು. ನನ್ನ ಪಾತ್ರದ ಚಿತ್ರೀಕರಣವಾಗಿದ್ದು ಒಂದು ಹಳ್ಳಿಯಲ್ಲಿ, ಅಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಇರಲಿಲ್ಲ. ಹಾಗಾಗಿ ಇಡೀ ವಾತಾವರಣ ಹಾಗೂ ಅಲ್ಲಿ ಕಳೆದ ದಿನಗಳು ಬಹಳ ಶಾಂತವಾಗಿದ್ದವು. ಇಡೀ ತಂಡದ
ಇನ್ವಾಲ್ ಮೆಂಟ್ ಪ್ರತಿ ಪಾತ್ರವೂ ಅತ್ಯದ್ಭುತವಾಗಿ ಕಂಡು ಬರಲು ಕಾರಣವಾಗಿದೆ. ಹೊಂದಿಸಿ ಬರೆಯಿರಿ ಖಂಡಿತವಾಗಿಯೂ ಒಂದು ಒಳ್ಳೆ ಅನುಭವ, ಪ್ರೇಕ್ಷಕರು ಇದನ್ನು ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಲ್ಲಿದ್ದೇನೆ ” ಎಂದಿದ್ದಾರೆ ನಟಿ ಅರ್ಚನ ಜೋಯಿಸ್.

RELATED ARTICLES

Most Popular

Share via
Copy link
Powered by Social Snap