ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ಮಂಕಾಗಿದೆ. ಬೆರಳೆಣಿಕೆಯಷ್ಟು ಚಿತ್ರಗಳು ಗಮನ ಸೆಳೆದಿವೆ.
ದಕ್ಷಿಣದ ಸಿನಿಮಾಗಳು ಬಾಲಿವುಡ್ ಮೇಲೆ ಸವಾರಿ ಮಾಡಿವೆ. ಹೊಸ ಬಗೆಯ ಕಥೆಯಿಂದ ದಕ್ಷಿಣದ ಸಿನಿಮಾಗಳು ಬಿಟೌನ್ ಮಂದಿಗೂ, ನಿರ್ದೇಶಕ, ನಿರ್ಮಾಪಕ, ಕಲಾವಿದರನ್ನು ಗಮನ ಸೆಳೆಯುವಂತೆ ಮಾಡಿವೆ.
ನಿರ್ದೇಶಕ ಅನುರಾಗ್ ಕಶ್ಯಪ್ ಅವರು ಈ ಬಗ್ಗೆ ಮಾತಾನಾಡಿದ್ದಾರೆ. ನಾವು ಇಂಗ್ಲಿಷನ್ನು ಹೇಗೆ ಸಾರ್ವತ್ರಿಕ ಎಂದು ನೋಡುತ್ತೇವೆ ಹಾಗೆ ಅವರು ಬಾಲಿವುಡನ್ನು ಸಾರ್ವತ್ರಿಕವೆಂದು ಅಂದುಕೊಂಡಿದ್ದಾರೆ ಅದು ಸತ್ಯವಲ್ಲ. ಈಗ 4k ಯಿಂದ 6k ಕ್ಯಾಮರಾಗಳು ಸುಲಭವಾಗಿ ಎಲ್ಲರಿಗೂ ಸಿಗುತ್ತದೆ. ನಿಮಗೆ ಸಿನಿಮಾ ಮಾಡಲು ಸ್ಥಳೀಯ ನಟರು ಸಿಗಬಹುದು. ಸಿನಿಮಾ ಮಾಡಲು ತುಂಬಾ ಜನರ ಅಗತ್ಯವೂ ಇರಲ್ಲ. ಇದು ಹೇಗೆ ಎಂದರೆ ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಮೆ ಬರುತ್ತದೆ ಆದರೆ ಬಲಿಷ್ಠವಾದ ಕೇಂದ್ರದ ಶಕ್ತಿಯೊಂದು ಇರುವುದಿಲ್ಲ. ಸಿನಿಮಾಗಳ ವಿಷಯಗಳು ಹಾಗೆಯೇ ಆಗಿದೆ ಎಂದರು.
ಇಂದು ಸಿನಿಮಾಗಳನ್ನು ಎಲ್ಲಿಂದ ಬೇಕಾದರೂ ನಿರ್ಮಿಸಬಹುದು ಹಾಗೂ ಆ ಸಿನಿಮಾಗಳನ್ನು ನಾವು ಎಲ್ಲಿಗೆ ಬೇಕಾದರೂ ತಲುಪಿಸಬಹುದು. ಬಾಲಿವುಡ್ ಯಾವತ್ತೂ ಬೇರೋರಿಲ್ಲ. ಅದು ಯಾವಾಗಲೂ ಮಾಸ್ ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಸಿನಿಮಾ ಮಾಡುತ್ತದೆ. ಚೆನ್ನಾಗಿ ಬೇರೂರಿರುವ ನಿರ್ಮಾಪಕರು ಇಲ್ಲಿದ್ದಾರೆಯೇ ಹೊರತು ಉದ್ಯಮವಾಗಿ, ಅದು ಎಂದಿಗೂ ಬೇರೂರಲಿಲ್ಲ ಎಂದರು.

