‘ಕಾಂತಾರ’ ಸಿನಿಮಾದ ಬಳಿಕ ನಟ ರಿಷಬ್ ಶೆಟ್ಟಿ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಭಿಮಾನಿಗಳಿದ್ದಾರೆ. 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿರುವ ಸಿನಿಮಾ ಈ ವರ್ಷದ ಟಾಪ್ ಸಿನಿಮಾಗಳಲ್ಲಿ ಒಂದು. ಐಎಂಡಿಬಿ ರೇಟಿಂಗ್ ನಲ್ಲಿ ಬೆಸ್ಟ್ ಸಿನಿಮಾವಾಗಿ ಕಾಂತಾರ ಸಿನಿಮಾವೂ ಸ್ಥಾನ ಪಡೆದುಕೊಂಡಿದೆ.
ರಿಷಬ್ ಶೆಟ್ಟಿ ಅವರಿಗೆ ಇತರ ಚಿತ್ರರಂಗದಿಂದ ಈಗಾಗಲೇ ಆಫರ್ ಗಳು ಬಂದಿವೆ. ಬಾಲಿವುಡ್, ಟಾಲಿವುಡ್ ಸೇರಿದಂತೆ ಎಲ್ಲಾ ರಂಗದಲ್ಲಿ ಪ್ರಶಂಸೆಗಿಟ್ಟಿಸಿಕೊಂಡಿದ್ದಾರೆ.
ಪಿಂಕ್ ವಿಲ್ಲಾ ನಡೆಸಿದ ಸಂದರ್ಶನದಲ್ಲಿ ಅನಿಲ್ ಕಪೂರ್ ಅವರು ರಿಷಬ್ ಶೆಟ್ಟಿ ಅವರ ಬಗ್ಗೆ ಮಾತಾನಾಡಿದ್ದಾರೆ.
ಈ ಸಂದರ್ಶನದಲ್ಲಿ ಅನಿಲ್ ಕಪೂರ್, ಮೃಣಾಲ್ ಠಾಕೂರ್, ಅಡಿವಿ ಶೇಷ್, ವಿದ್ಯಾ ಬಾಲನ್, ರಿಷಬ್ ಶೆಟ್ಟಿ ಭಾಗವಹಿಸಿದ್ದಾರೆ. ಈ ವೇಳೆ ರಿಷಬ್ ಹಾಗೂ ಕಾಂತಾರದ ಅನಿಲ್ ಕಪೂರ್ ಮಾತಾನಾಡಿದ್ದಾರೆ.
ಅನಿಲ್ ಕಪೂರ್ ಅವರು ‘ಪಲ್ಲವಿ ಅನುಪಲ್ಲವಿ’ ಕನ್ನಡ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ಆ ಬಳಿಕ ಹಿಂದಿಯಲ್ಲಿ ಬ್ಯುಸಿಯಾದರು. ಕಾರ್ಯಕ್ರಮದಲ್ಲಿ ಮಾತಾನಾಡಿದ ಅವರು “ಮುಂದಿನ ಸಿನಿಮಾವನ್ನು ನನ್ನೊಂದಿಗೆ ಮಾಡಿ” ಎಂದು ಕಾಂತಾರದ ಬಗ್ಗೆ ಮಾತಾನಾಡುತ್ತಾ ರಿಷಬ್ ಶೆಟ್ಟಿ ಕುರಿತು ಮಾತಾನಾಡಿದ್ದಾರೆ.
ಇತ್ತೀಚೆಗೆ ನಟ ನವಾಝುದ್ದೀನ್ ಸಿದ್ದಿಕ್ಕಿ ಕೂಡ ರಿಷಬ್ ಶೆಟ್ಟಿ ಅವರೊಂದಿಗೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದರು.

