HomeNewsಅಮಿತ್ ರಾವ್ "ಯದ್ಭಾವಂ ತದ್ಭವತಿ" ಚಿತ್ರಕ್ಕೆ 54ನೇ ಪ್ರಶಸ್ತಿಯ ಗರಿ: ಈ ಬಾರಿ ಅತ್ಯುತ್ತಮ ನಟ

ಅಮಿತ್ ರಾವ್ “ಯದ್ಭಾವಂ ತದ್ಭವತಿ” ಚಿತ್ರಕ್ಕೆ 54ನೇ ಪ್ರಶಸ್ತಿಯ ಗರಿ: ಈ ಬಾರಿ ಅತ್ಯುತ್ತಮ ನಟ

ಮೈಸೂರ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಅಮಿತ್ ರಾವ್ ಅವರಿಗೆ ‘ಯದ್ಭವಂ ತದ್ಭವತಿ’ ಚಿತ್ರದಲ್ಲಿನ ನಟನೆಗೆ ಅತ್ಯುತ್ತಮ ನಟ‌ ಪ್ರಶಸ್ತಿಯನ್ನು ನೀಡಲಾಯಿತು.

ಬಿಸಿಡಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿರುವ “ಯದ್ಭಾವಂ ತದ್ಭವತಿ” ಚಿತ್ರವನ್ನು ಅಮಿತ್ ರಾವ್ ಅವರೇ ನಟಿಸಿ, ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಲಿದೆ.

ಈಗಾಗಲೇ ಹಲವರು ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು 53 ಪ್ರಶಸ್ತಿಗಳನ್ನು ಗೆದ್ದಿರುವ “ಯದ್ಭಾವಂ ತದ್ಭವತಿ”ಗೆ ಈಗ ಮತ್ತೊಂದು ಪ್ರಶಸ್ತಿಯ ಗರಿ ಲಭಿಸಿದೆ.

ಚಿತ್ರಕ್ಕೆ ಛಾಯಾಗ್ರಾಹಕರಾಗಿ ಸುದೀಪ್ ಫ್ರೆಡ್ರಿಕ್, ಸಂಗೀತ ನಿರ್ದೇಶಕರಾಗಿ ರಾಕಿ ಸೋನು, ಸಂಕಲನಕಾರರಾಗಿ ಶಿವರಾಜ್ ಮೆಹು , ಡಿಐ ಮತ್ತು ವಿಎಫ್ ಎಕ್ಸ್ ಸುಪ್ರೀತ್ ಬಿಕೆ, ಸಾಹಿತ್ಯವನ್ನು ನವೀನ್ ರೈ,
ಕಾಸ್ಯೂಮ್ ಡಿಸೈನರ್ ರಶ್ಮಿ ಅನುಪ್ ರಾವ್,
ಸಹ ನಿರ್ಮಾಪಕರಾಗಿ ಆರ್. ಶ್ರೀನಿವಾಸ ಶೆಟ್ಟಿ, ನಿರ್ಮಾಪಕ ಮಂಜುನಾಥ್ ದೈವಜ್ಞ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ.

ಅತ್ಯುತ್ತಮ ನಟ ಪ್ರಶಸ್ತಿ ಗೆದ್ದ ಬಳಿಕ ಸಂತಸವನ್ನು ಹಂಚಿಕೊಂಡ ನಿರ್ದೇಶಕ ಅಮಿತ್ ರಾವ್, ” ನಮ್ಮ ಕರ್ನಾಟಕದ ಹೆಮ್ಮೆಯ ಸಾಂಸ್ಕೃತಿಕ ನಗರಿ ಹೆಸರುವಾಸಿಯಾದ ಮೈಸೂರ್ ನಲ್ಲಿ ನಡೆದ ಮೈಸೂರ್ ಇಂಟರ್ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ನನ್ನ ನಟನೆಗೆ ನೀಡಿದ್ದು, ಹೊರ ರಾಜ್ಯಗಳಲ್ಲಿ ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ಛಾಯಾಗ್ರಹ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ನಿರ್ಮಾಪಕ, ಅತ್ಯುತ್ತಮ ಕಥೆ, ಹೀಗೆ ಹಲವಾರು ಪ್ರಶಸ್ತಿಗಳು ಸಿಕ್ಕಿದ್ದರೂ,
ನಮ್ಮ ಕನ್ನಡದ ನೆಲದಲ್ಲಿ ನಮ್ಮ ಸಿನಿಮಾಗೆ ಸಿಕ್ಕ ಮೊದಲ ಪ್ರಶಸ್ತಿ
ಯಾಗಿದ್ದು, ನನ್ನ ಹೃದಯಕ್ಕೆ ಹತ್ತಿರವಾದ ಪ್ರಶಸ್ತಿ ಆಗಿದೆ ಮತ್ತು ನನಗೆ ಹೆಮ್ಮೆಯ ವಿಷಯ ಎಂದಿದ್ದಾರೆ.

RELATED ARTICLES

Most Popular

Share via
Copy link
Powered by Social Snap