ರೆಬೆಲ್ ಸ್ಟಾರ್ ಅಂಬರೀಶ್, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇಬ್ಬರಿಗೂ ಅವರದ್ದೇ ಆದ ದೊಡ್ಡ ಅಭಿಮಾನಿಗಳ ವರ್ಗವಿದೆ. ಇಬ್ಬರೂ ಇಂದು ನಮ್ಮೊಂದಿಗಿಲ್ಲ ಆದರೆ ದೈಹಿಕವಾಗಿ ನಮ್ಮೊಂದಿಗಿಲ್ಲ ಮಾನಸಿಕವಾಗಿ ಎಂದಿಗೂ ಇಬ್ಬರ ಸದಾ ಅಮರ.
ಅಭಿಮಾನವನ್ನು ಖಂಡಿತವಾಗಿಯೂ ಪದಗಳಲ್ಲಿ ವರ್ಣಿಸಲು ಆಗುವುದಿಲ್ಲ. ಇತ್ತೀಚೆಗೆ (ನ.24 ರಂದು) ಅಂಬರೀಶ್ ಅವರ ಪುಣ್ಯ ತಿಥಿ ನೆರವೇರಿತು. ಅಂಬಿಯಣ್ಣನ ಫ್ಯಾನ್ಸ್ ಗಳು ಆ ದಿನ ಹತ್ತಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ.
ಅಪ್ಪು ಹಾಗೂ ಅಂಬರೀಶ್ ಇಬ್ಬರು ಪುತ್ಥಳಿ ಒಂದೇ ಕಡೆ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಪುತ್ಥಳಿಯನ್ನು ಉಮೇಶ್ ಸಿ ಎಂಬ ಅಭಿಮಾನಿಯೊಬ್ಬರು ಸ್ಥಾಪಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಈ ಪುತ್ಥಳಿಯಿದೆ.


ಅಂಬಿ – ಅಪ್ಪು ಅರಮನೆ ಎಂದು ಪುತ್ಥಳಿಗೊಂದು ಸುಂದರವಾದ ಗುಡಿಯನ್ನು ಸ್ಥಾಪಿಸಿದ್ದಾರೆ.
ಸಂಸದೆ ಸುಮಲತಾ ಅಂಬರೀಶ್ ಅವರು ಪುತ್ಥಳಿಯನ್ನು ಅನಾವರಣ ಮಾಡಿದ್ದಾರೆ. ಫ್ಯಾನ್ಸ್ ಗಳು ತಮ್ಮ ಮೆಚ್ಚಿನ ನಟರ ಪುತ್ಥಳಿಯನ್ನು ವೀಕ್ಷಿಸುತ್ತಿದ್ದಾರೆ.

