ನಟ ಅಜಯ್ ರಾವ್ ಇತ್ತೀಚೆಗೆ ‘ದಿಲ್ ಪಸಂದ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮತ್ತೆ ನಾಯಕನಾಗಿ ಹೊಸ ಚಿತ್ರದಲ್ಲಿ ನಟಿಸಲು ರೆಡಿಯಾಗಿದ್ದಾರೆ.
‘ಕೃಷ್ಣ ಲೀಲಾ’ ಚಿತ್ರವನ್ನು ನಿರ್ಮಾಣ ಮಾಡಿ ನಟಿಸಿದ್ದ ಅಜಯ್ ರಾವ್ ನಿರ್ಮಾಪಕರಾಗಿಯೂ ಸೈ ಎನ್ನಿಸಿಕೊಂಡಿದ್ದರು. ಈಗ ತಮ್ಮ ಬ್ಯಾನರ್ ನಲ್ಲಿ ಎರಡನೇ ಚಿತ್ರವನ್ನು ನಿರ್ಮಾಣ ಮಾಡಲಿದ್ದಾರೆ.
‘ಕಟಿಂಗ್ ಶಾಪ್’ ಚಿತ್ರವನ್ನು ನಿರ್ದೇಶಿಸಿದ ಪವನ್ ಭಟ್ ನೊಂದಿಗೆ ಅಜಯ್ ರಾವ್ ಸಿನಿಮಾವನ್ನು ಮಾಡಲಿದ್ದಾರೆ. ಈ ಸಿನಿಮಾವನ್ನು ಅಜೇಯ್ ರಾವ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಲಿದೆ.
ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಕಪ್ಪು ಕೋರ್ಟ್ ,ಪ್ಯಾಂಟ್ ಹಾಕಿಕೊಂಡು ಲಾಯರ್ ಆಗಿ ಅಜಯ್ ರಾವ್ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೈಟಲ್ ಟೀಸರ್ ಇದೇ ನ.25 ರಂದು ರಿವೀಲ್ ಆಗಲಿದೆ.
2023 ಕ್ಕೆ ಸಿನಿಮಾ ತೆರೆಗೆ ಬರಲಿದೆ.

