ಸ್ಯಾಂಡಲ್ ವುಡ್ ಬೆಡಗಿ ʼಐಂದ್ರಿತಾ ರೇʼ ದಿಗಂತ್ ಅವರನ್ನು ಪ್ರೀತಿಸಿ ಮದುವೆಯಾದವರು. ವಿವಾಹದ ಬಳಿಕವೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಐಂದ್ರಿತಾ ʼತಿಮ್ಮಯ್ಯ & ತಿಮ್ಮಯ್ಯʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಪ್ರಚಾರದ ಅಂಗವಾಗಿ ಸಿನಿಮಾ ವೆಬ್ ಸೈಟ್ ವೊಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಇಲ್ಲಿ ದಿಗಂತ್ ಅವರ ಯಾವ ಸಿನಿಮಾ ಇಷ್ಟ, ನಟಿಯಾಗದಿದ್ದರೆ ಏನು ಆಗುತ್ತಿದ್ರಿ ಮುಂತಾದ ಪ್ರಶ್ನೆಯ ಉತ್ತರಿಸಿದ್ದಾರೆ.
ಬೆಂಗಳೂರಿನ ಡಾ ಬಿ ಆರ್ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲಿ ದಂತ ವಿಜ್ಞಾನದಡಿಯಲ್ಲಿ ಬ್ಯಾಚೆಲರ್ ಡಿಗ್ರಿ ವ್ಯಾಸಾಂಗ ಮಾಡಿರುವ ಐಂದ್ರಿತಾ ತಾನು ನಟಿಯಾಗದಿದ್ದರೆ ದಂತ ವೈದ್ಯ ಆಗುತ್ತಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ನಾನು ಮತ್ತು ದಿಗಂತ್ ಸನಿಹವಾಗಲು ಸಾಕು ಪ್ರಾಣಿಯ ಮೇಲಿನ ಪ್ರೀತಿಯೇ ಕಾರಣ. ನನಗೆ ಸಾಕು ಪ್ರಾಣಿಗಳ ಎನ್ ಓ ರೀತಿಯ ಕೇಂದ್ರವನ್ನು ತೆರೆಯುವ ಕನಸಿದೆ ಎಂದು ಹೇಳಿದ್ದಾರೆ.
ಇನ್ನು ಮುಂದುವರೆದು ಮಾತಾನಾಡಿದ ಅವರು ದಿಗಂತ್ ಅವರ ಸಿನಿಮಾ ಇಷ್ಟ ಎನ್ನುವ ಪ್ರಶ್ನೆಗೆ ಪವನ್ ಕುಮಾರ್ ಅವರಿ ನಿರ್ದೇಶನ ಮಾಡಿದ್ದ ʼಲೈಫ್ ಇಷ್ಟೇನೇʼ ಚಿತ್ರ ನನಗೆ ತುಂಬಾ ಇಷ್ಟ ಎಂದಿದ್ದಾರೆ.
ಇತ್ತೀಚೆಗೆ ಯಾವ ಸಿನಿಮಾವನ್ನು ನೋಡಿದ್ರಿ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು “ನಾನು ಇತ್ತೀಚೆಗೆ ʼಕಾಂತಾರʼ ಸಿನಿಮಾವನ್ನು ನೋಡಿದೆ. ಕಂಟೆಂಟ್, ರಿಷಬ್ ನಟನೆ ಹಾಗೂ ನಿರ್ದೇಶನ ಎಲ್ಲವೂ ನನಗೆ ಇಷ್ಟವಾಯಿತು” ಎಂದಿದ್ದಾರೆ.

