

ಅಖಿಲ್ ಅಕ್ಕಿನೇನಿ ನಟನೆಯ ಟಾಲಿವುಡ್ ನ ಬಹು ನಿರೀಕ್ಷಿತ ‘Agent” ಚಿತ್ರದ ಟೀಸರ್ ರಿಲೀಸ್ ಆಗಿದೆ.
ಖ್ಯಾತ ನಿರ್ದೇಶಕ ಸುರೆಂದ್ರ ರೆಡ್ಡಿ ಅವರು ಅ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಅಖಿಲ್ ಲವರ್ ಬಾಯ್ ನಿಂದ ಔಟ್ & ಔಟ್ ಆ್ಯಕ್ಷನ್ ಅವತಾರವನ್ನು ಎತ್ತಿದ್ದಾರೆ. ಗನ್ ಹಿಡಿದು ಫೈಯರ್ ಮಾಡುವ ಲುಕ್ ನಲ್ಲಿ ಅಖಿಲ್ ಮಿಂಚಿದ್ದಾರೆ.
ಸಾಕ್ಷಿ ವೈದ್ಯ ಅಖಿಲ್ ಗೆ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಲೆಯಾಳಂ ಚಿತ್ರ ರಂಗದ ಲೆಜೆಂಡರಿ ನಟ ಮಮ್ಮುಟ್ಟಿ ಟೀಸರ್ ನಲ್ಲಿ ಬೆಂಕಿಯಂತೆ ಮಿಂಚಿದ್ದಾರೆ.
ಬಿಗ್ ಬಜೆಟ್ ಮೂವಿಯಾಗಿರುವ ‘Agent’ ಸ್ಪೈ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿದೆ. ಚಿತ್ರದ ಟೀಸರ್ ನ್ನು ಕಿಚ್ಚ ಸುದೀಪ್ ಹಾಗೂ ನಟ ಶಿವ ಕಾರ್ತಿಕೇಯನ್ ರಿಲೀಸ್ ಮಾಡಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಸಂಗೀತ ನಿರ್ದೇಶನ, ಕ್ಯಾಮರಾ ವರ್ಕ್, ಸಂಕಲನ ವಿಭಾಗ ಸೇರಿದಂತೆ ಚಿತ್ರದಲ್ಲಿ ಖ್ಯಾತ ಹೆಸರುವಾಸಿಯಾದ ತಂತ್ರಜ್ಞರೇ ತಮ್ಮ ಕೈಚಳಕ ತೋರಿಸಿದ್ದಾರೆ.
ಬಹು ನಿರೀಕ್ಷಿತ ಚಿತ್ರ ಯಾವಾಗ ಬಿಡುಗಡೆ ಅಗುತ್ತದೆ ಎನ್ನುವುದು ಇನ್ನಷ್ಟೇ ತಿಳಿದು ಬರಬೇಕಿದೆ.



