ಲೋಕೇಶ್ ಕನಕರಾಜ್ – ದಳಪತಿ ವಿಜಯ್ ಕಾಂಬಿನೇಷನ್ ಬಹು ನಿರೀಕ್ಷಿತ ಸಿನಿಮಾಕ್ಕೆ ಚಾಲನೆ ಸಿಕ್ಕಿದ್ದು, ಇದೀಗ ಸಿನಿಮಾದ ಟೈಟಲನ್ನು ಪ್ರೋಮೋ ಮೂಲಕ ಚಿತ್ರ ತಂಡ ಪ್ರೋಮೋ ರಿಲೀಸ್ ಮಾಡಿದೆ.
ಇತ್ತೀಚೆಗಷ್ಟೇ ಸಿನಿಮಾದ ಮುಹೂರ್ತವನ್ನು ನೆರವೇರಿಸಿದ ಸಿನಿಮಾ ತಂಡ ‘ಲಿಯೋ’ ಎನ್ನುವ ಟೈಟಲನ್ನು ಚಿತ್ರಕ್ಕಿಟ್ಟಿದೆ. ‘ಬ್ಲಡ್ ಸ್ವಿಟ್’ ಎನ್ನುವ ಟ್ಯಾಗ್ ಲೈನ್ ನೀಡಲಾಗಿದೆ.
ಲೋಕೇಶ್ ಕನಕರಾಜ್ ತನ್ನ ನಿರ್ದೇಶನದ ಮೂಲಕವೇ ಖ್ಯಾತಿ, ‘ಮಾಸ್ಟರ್’ ದಳಪತಿ ವಿಜಯ್ ಅವರೊಂದಿಗೆ ಮತ್ತೆ ಕೈಜೋಡಿಸಿದ್ದು,ಟೈಟಲ್ ಪ್ರೋಮೋ ಕುತೂಹಲವನ್ನು ಹೆಚ್ಚಿಸಿದೆ.
ವಿಜಯ್ ಮತ್ತು ತ್ರಿಷಾ ಜೊತೆ ಸಂಜಯ್ ದತ್, ಗೌತಮ್ ವಾಸುದೇವ ಮೆನನ್, ಮಿಸ್ಕಿನ್, ಮನ್ಸೂರ್ ಅಲಿ ಖಾನ್, ಪ್ರಿಯಾ ಆನಂದ್ ಮುಂತಾದವರು ನಟಿಸಲಿದ್ದಾರೆ. ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ‘ಲಿಯೋ’ ಸಿನಿಮಾ ರಿಲೀಸ್ ಆಗಲಿದೆ.
ಮನೋಜ್ ಪರಮಹಂಸ ಛಾಯಾಗ್ರಹಣ, ಅನ್ಬರವೀ ಸಾಹಸ, ಫಿಲೋಮಿನ್ ರಾಜ್ ಸಂಕಲನ, ಸತೀಸ್ ಕುಮಾರ್ ಕಲೆ, ದಿನೇಶ್ ನೃತ್ಯ ನಿರ್ದೇಶನ, ಸಂಭಾಷಣೆ ಲೋಕೇಶ್ ಕನಗರಾಜ್, ರತ್ನ ಕುಮಾರ್, ಧೀರಜ್ ವೈದ್ಯ, ರಾಮಕುಮಾರ್ ಬಾಲಸುಬ್ರಮಣ್ಯ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

