ಅಭಿಷೇಕ್ ಅಂಬರೀಶ್ ‘ಯಂಗ್ ರೆಬೆಲ್ ಸ್ಟಾರ್’ ಆಗಿ ಮಿಂಚುತ್ತಿದ್ದಾರೆ. ‘ಅಮರ್’ ಮೂಲಕ ಚಂದನವನಕ್ಕೆ ರಫ್ & ಟಫ್ ಲುಕ್ ವುಳ್ಳ ಲವರ್ ಬಾಯ್ ಎಂಟ್ರಿಯಾಗಿದ್ದಾರೆ.
ಮಾಸ್ – ಕ್ಲಾಸ್ ಅವತಾರದಲ್ಲಿ ಅಭಿಷೇಕ್ ಅಬ್ಬರಿಸಲು ರೆಡಿಯಾಗಿದ್ದಾರೆ. ಸುಕ್ಕಾ ಸೂರಿಯೊಂದಿಗೆ ‘ಬ್ಯಾಡ್ ಮ್ಯಾನರ್ಸ್’, ಕೃಷ್ಣ ಅವರೊಂದಿಗೆ ‘ಕಾಳಿ’ ಮಹೇಶ್ ಕುಮಾರ್ ನೊಂದಿಗೆ ಎಎ4 ಸಿನಿಮಾವನ್ನು ಮಾಡುತ್ತಿದ್ದಾರೆ.
ಜೂ.ರೆಬೆಲ್ ಸ್ಟಾರ್ ಅವರಿಗೆ ಅಭಿಮಾನಿಗಳ ವರ್ಗ ದೊಡ್ಡದಿದೆ. ಅಭಿಮಾನಿಗಳ ಪ್ರೀತಿಗೆ ಅಭಿ ಸದಾ ಪ್ರತಿಕ್ರಿಯೆ ನೀಡುತ್ತಾರೆ.
ಮದ್ದೂರು ತಾಲೂಕು ಕೊಪ್ಪ ಹೋಬಳಿ ಹರಳಕೆರೆ ಗ್ರಾಮದ ಅಶ್ವಥ್ ಎನ್ನುವ ಅಭಿಮಾನಿಯೊಬ್ಬ ಬೆನ್ನ ಮೇಲೆ ಅಭಿಷೇಕ್ ಅಂಬರೀಶ್ ಅವರ ಟ್ಯಾಟೋ ಹಾಕಿಸಿ ‘ಯಜಮಾನ್ರು’ ಎಂದು ಬರೆದುಕೊಂಡಿದ್ದು, ವೈರಲ್ ಆಗಿದೆ.
ಅಭಿಮಾನಿ ಅಭಿಷೇಕ್ ಅವರನ್ನು ಭೇಟಿಯಾಗಿ, ಖುಷ್ ಆಗಿದ್ದಾರೆ.



