ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ನಿಶ್ಚಿತಾರ್ಥದ ಬಗ್ಗೆ ಕಳೆದ ಕೆಲ ದಿನಗಳಿಂದ ಸುದ್ದಿಯಾಗುತ್ತಿದೆ. ಅಭಿಷೇಕ್ ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿಯನ್ನು ಅವರ ತಾಯಿ ಹಾಗೂ ಅಭಿಷೇಕ್ ಇಬ್ಬರೂ ತಳ್ಳಿ ಹಾಕಿದ್ದರು.
ಸದ್ಯ ಜೂ. ರೆಬೆಲ್ ಸ್ಟಾರ್ ಅವರ ಮನಸ್ಸು ಕದ್ದ ಚೋರಿಯ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಿದ್ದಿದೆ. ಡಿ. 11 ರಂದು ಅಭಿಷೇಕ್ ಅಂಬರೀಶ್ ಅವರು ಜನಪ್ರಿಯ ಫ್ಯಾಷನ್ ಡಿಸೈನರ್‌ಗಳಲ್ಲಿ ಒಬ್ಬರಾಗಿರೋ ಪ್ರಸಾದ್ ಬಿದ್ದಪ್ಪ ಅವರ ಪುತ್ರಿ ಅವಿವಾ ಬಿದ್ದಪ್ಪ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.
ಅವಿವಾ ಬಿದ್ದಪ್ಪ ಹಾಗೂ ಅಭಿಷೇಕ್ ಸ್ನೇಹಿತರಾಗಿದ್ದು ಇಬ್ಬರು ಬೆಂಗಳೂರಿನ ಪ್ರತಿಷ್ಠಿತ ಹೊಟೇಲ್ ನಲ್ಲಿ ಆಪ್ತರ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನುವ ಗಾಸಿಪ್ ಹರಿದಾಡುತ್ತಿದೆ.
ಅವಿವಾ ಬಿದ್ದಪ್ಪ ತನ್ನ ತಂದೆಯೊಂದಿಗೆ ಸೇರಿ ಫ್ಯಾಷನ್ ಡಿಸೈನರ್ ಉದ್ಯಮದಲ್ಲಿ ಯಶಸ್ಸುಗಳಿಸಿದ್ದಾರೆ. ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನು ನಡೆಸುತ್ತಿದ್ದಾರೆ. 2016ರಿಂದ ಪ್ರಸಾದ್ ಬಿದ್ದಪ್ಪ ಮಾಡಲ್ ಮ್ಯಾನೇಜ್ಮೆಂಟ್ ಕಂಪನಿಯ ನಿರ್ದೇಶಕರಾಗಿದ್ದಾರೆ. 2009ರಿಂದ ಪ್ರಸಾದ್ ಬಿದ್ದಪ್ಪ ಅಸೋಸಿಯೇಟ್ಸ್‌ಗೂ ನಿರ್ದೇಶಕಿಯಾಗಿದ್ದಾರೆ.
ಸದ್ಯ ಜೂ. ರೆಬೆಲ್ ಸ್ಟಾರ್ ʼಬ್ಯಾಡ್ ಮ್ಯಾನರ್ಸ್ʼ ಹಾಗೂ ʼಕಾಳಿʼ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

