

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ‘ಅಬ್ಬರ‘ ಥಿಯೇಟರ್ ನಲ್ಲಿ ಅಬ್ಬರಿಸಲು ರೆಡಿಯಾಗಿದೆ.
ಆ್ಯಕ್ಷನ್ ಕಥಾ ಹಂದರ ಹೊಂದಿರುವ ಚಿತ್ರ ಒಂದಿಷ್ಟು ಅಂಶಗಳೊಂದಿಗೆ ನಿರೀಕ್ಷೆ ಹುಟ್ಟಿಸಿದೆ. ಬಹು ತಾರಾಗಣವುಳ್ಳ ಚಿತ್ರ ಆಗಸ್ಟ್ 12 ರಂದು ತೆರೆಗೆ ಬರಲಿದೆ.
ಕೆ. ರಾಮ್ ನಾರಾಯಣ್ ನಿರ್ದೇಶನದ ‘ಅಬ್ಬರ’ ಚಿತ್ರ ತಂಡ ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾತನಾಡುತ್ತ, ಆಗಸ್ಟ್ 1 ರಿಂದ ರಾಜ್ಯಾದ್ಯಂತ ಚಿತ್ರ ತಂಡ ಪ್ರಚಾರದ ಹಂತವಾಗಿ ‘ಅಬ್ಬರ’ ಯಾತ್ರೆ ನಡೆಸಲಿದೆ. ಈ ಪ್ರಚಾರದಲ್ಲಿ ಚಿತ್ರದ ನಾಯಕ, ನಾಯಕಿ ಹಾಗೂ ಕಲಾವಿದರು ಭಾಗಿಯಾಗಲಿದ್ದಾರೆ ಎಂದು ಹೇಳಿದೆ.
ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಬೈಕ್ ರ್ಯಾಲಿಯನ್ನು ಮಾಡಲಿದ್ದಾರೆ.
ರಾಜ್ ಶ್ರಿ ಪೊನ್ನಪ್ಪ,ಲೇಖಾ ಚಂದ್ರ, ರವಿಶಂಕರ್ ಸೇರಿದಂತೆ ಪ್ರಮುಖ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಹಾಡು ಹಾಗೂ ಟೀಸರ್ ಸದ್ದು ಮಾಡುತ್ತಿದೆ.



