‘ಲಾಲ್ ಸಿಂಗ್ ಚಡ್ಡಾ’ ಬಳಿಕ ಆಮಿರ್ ಖಾನ್ ಮತ್ತೆ ಸಿನಿಮಾದತ್ತ ಮರಳಲು ಸಿದ್ದರಾಗಿದ್ದಾರೆ. ಆದರೆ ಈ ಬಾರಿ ನಟನಾಗಿ ಅಲ್ಲ. ನಿರ್ಮಾಪಕರಾಗಿ.
‘ಲಾಲ್ ಸಿಂಗ್ ಚಡ್ಡಾ’ ಬಾಕ್ಸ್ ಆಫೀಸ್‌ನಲ್ಲಿ ಅಷ್ಟಾಗಿ ಕಮಾಲ್ ಮಾಡಿಲ್ಲ. ಬಾಯ್ಕಟ್ ಎಫೆಕ್ಟ್ ಕೂಡ ಚಿತ್ರಕ್ಕೆ ತಟ್ಟಿತ್ತು.
ಆಮಿರ್ ಖಾನ್ ʼಕ್ಯಾಂಪಿಯೋನ್ಸ್ʼ ಎಂಬ ಸ್ಪ್ಯಾನಿಷ್ ಚಲನಚಿತ್ರದ ರೂಪಾಂತರ
ʼಚಾಂಪಿಯನ್ಸ್ʼ ಸಿನಿಮಾವನ್ನು ಆಮಿರ್ ಖಾನ್ ಅವರ ಆಮಿರ್ ಪ್ರೂಡಕ್ಷನ್, ಸೋನಿ ಪಿಕ್ಚರ್ಸ್ ಇಂಡಿಯಾ ಹಾಗೂ 200 ನಾಟ್ ಔಟ್ ಪ್ರೊಡಕ್ಷನ್ಸ್ ನೊಂದಿಗೆ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ.
ಈ ಚಿತ್ರ ಕ್ರೀಡಾ ಕಥೆಯ ಸ್ಪೂರ್ತಿದಾಯಕ ಸಿನಿಮಾವಾಗಿದ್ದು. ಆಮಿರ್ ಖಾನ್ ಅವರೇ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಮೊದಲು ಖಾತ್ರಿಯಾಗಿತ್ತು. ಆದರೆ ಈಗ ಯೋಜನೆ ಬದಲಾಗಿದೆ. ಇತ್ತೀಚೆಗೆ ಮಾಧ್ಯಮದ ಮುಂದೆ ಮಾತಾನಾಡುತ್ತಾ ಆಮಿರ್ ಖಾನ್ ʼಚಾಂಪಿಯನ್ಸ್ʼ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.
“ನಾನು 35 ವರ್ಷಗಳಿಂದ ಸಿನಿಮಾರಂಗದಲ್ಲಿ ನಟಿಸುತ್ತಿದ್ದೇನೆ. ಈ ವರ್ಷಗಳಲ್ಲಿ ನಾನು ಸಂಪೂರ್ಣವಾಗಿ ನನ್ನ ಕೆಲಸದ ಮೇಲೆ ಗಮನ ಹರಿಸಿದ್ದೇನೆ. ನನ್ನ ಆತ್ಮೀಯರಾದವರಿಗೆ ನನ್ನ ನಿರ್ಣಯ ಸರಿಯಲ್ಲ ಎಂದು ಅನ್ನಿಸಬಹುದು. ಆದರೆ ನನ್ನ ಪ್ರಕಾರ ಇದು ನಾನು ಅವರಿಂದ ದೂರವಿರುವುದು ಸರಿ ಎಂದು ಅನ್ನಿಸುತ್ತದೆ. ಜೀವನವನ್ನು ಬೇರೊಂದು ಮಾರ್ಗದಲ್ಲಿಯೂ ಅನುಭವಿಸಬೇಕು. ಮುಂದಿನ ಒಂದೂವರೆ ವರ್ಷ ನಾನು ನಟನಾಗಿ ಕೆಲಸ ಮಾಡುವುದಿಲ್ಲ” ಎಂದು ಹೇಳಿದ್ದಾರೆ.
ನಾನು ನಟನೆಯಿಂದ ಬ್ರೇಕ್ ತೆಗೆದುಕೊಂಡು ನನ್ನ ಕುಟುಂಬ, ಮಕ್ಕಳು,ತಾಯಿಯೊಂದಿಗೆ ಸಮಯ ಕಳೆಯುತ್ತೇನೆ ಎಂದು ಆಮಿರ್ ಹೇಳಿದ್ದಾರೆ.

