‘9 ಸುಳ್ಳು ಕಥೆಗಳು’ ವಿಭಿನ್ನವಾದ ಕಥೆವುಳ್ಳ, ಟೈಟಲ್ ವುಳ್ಳ ಚಿತ್ರವೊಂದು ತೆರೆಗೆ ಬರಲು ಸಿದ್ದವಾಗಿದೆ.
ಜೀವನದ ನವರಸಗಳನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಚಿತ್ರಕ್ಕೆ ಮಂಜುನಾಥ್ ಮುನಿಯಪ್ಪ ಆ್ಯಕ್ಷನ್ ಕಟ್ ಹೇಳಿ ನಿರ್ಮಾಣ ಮಾಡಿದ್ದಾರೆ. ರಂಗಭೂಮಿಯಲ್ಲಿ ಅನುಭವ ಇರುವ ಮಂಜುನಾಥ್ ಅವರಿಗೆ ಇದು ಮೊದಲ ಚಿತ್ರ.
ಚಿತ್ರದ ಬಗ್ಗೆ ಮಾತಾನಾಡಿದ ಮಂಜುನಾಥ್ ಮುನಿಯಪ್ಪ,
ನಮ್ಮ ಚಿತ್ರದಲ್ಲಿ ನವರಸಗಳನ್ನು ಆಧರಿಸಿದ ಒಂಭತ್ತು ಕಥೆಗಳಿದೆ. ನೈಜಘಟನೆಗಳನ್ನಿಟ್ಟುಕೊಂಡು ಈ ಚಿತ್ರದ ಕಥೆ ಸಿದ್ದ ಮಾಡಿದ್ದೇನೆ. ಇದೇ 9 ನೇ ತಾರೀಖು ಚಿತ್ರ ತೆರೆಗೆ ಬರಲಿದೆ ಪ್ರೋತ್ಸಾಹ ನೀಡಿ ಎಂದರು.


ನಟ ವಿನಾಯಕ ಜೋಶಿ. ಮಾತಾನಾಡಿ,
ಸಾಕಷ್ಟು ರಂಗಭೂಮಿ ಕಲಾವಿದರ ಸಮಾಗಮದಲ್ಲಿ ಸಿದ್ದವಾಗಿರುವ ಚಿತ್ರವಿದು. ನಾನು ಈ ಚಿತ್ರದಲ್ಲಿ ಸಾಹಿತ್ಯ ಪ್ರೇಮಿಯಾಗಿ ಕಾಣಿಸಿಕೊಂಡಿದ್ದೇನೆ ಎಂದರು.
ಸಂಗೀತ ನಿರ್ದೇಶಕರಾದ ಪ್ರವೀಣ್ – ಪ್ರದೀಪ್, ಛಾಯಾಗ್ರಾಹಕ ಪರಮೇಶ್, ಹಾಡು ಬರೆದಿರುವ ಸತೀಶ್ ಬೆಲ್ಲೂರು ಹಾಗೂ ವಿಕ್ರಮ್ ವಸಿಷ್ಠ ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಿದರು.
ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ನಿರ್ದೇಶಕ , ನಟ ರಿಷಭ್ ಶೆಟ್ಟಿ ಅವರು ಒಂದು ಹಾಡನ್ನು ಹಾಡಿದ್ದಾರೆ. ಸಂತ ಶಿಶುನಾಳ ಶರೀಫ್ ಅವರ ಹಾಡೊಂದು ಚಿತ್ರದಲ್ಲಿ ಬಳಸಲಾಗಿದೆ.
ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ವಿನಾಯ್ ಜೋಶಿ, ಕರಿ ಸುಬ್ಬು, ಸುಕೃತಾ ವಾಗ್ಳೆ, ಲಕ್ಷ್ಮೀ ಚಂದ್ರಶೇಖರ್ ಸೇರಿದಂತೆ ಅನೇಕ ಕಲಾವಿದರು ನಟಿಸಿದ್ದಾರೆ.
ಚಿತ್ರ ಸೆಪ್ಟೆಂಬರ್ 9 ರಂದು ರಿಲೀಸ್ ಆಗಲಿದೆ.

