ವೈಜನಾಥ್ ಬಿರಾದಾರ್ ಅವರ 500 ’90 ಬಿಡಿ ಮನೇಗ್’ ನಡಿ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ.
ಎಪ್ಪತ್ತರ ವಯಸ್ಸಲ್ಲಿ ಕಮರ್ಷಿಯಲ್ ಲುಕ್ ನಲ್ಲಿ ಮಿಂಚಿರುವ ವೈಜನಾಥ್ ಬಿರಾದಾರ್ ಮಸ್ತ್ ಆಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಚಿತ್ರದ ಹಾಡೊಂದು ವೈರಲ್ ಆಗಿದೆ.
ಇತ್ತೀಚೆಗೆ ಮಾಧ್ಯಮ ಮಿತ್ರರನ್ನು ಮುಖ್ಯ ಅತಿಥಿಗಳನ್ನಾಗಿ ಚಿತ್ರದ “ಸಿಂಗಲ್ ಕಣ್ಣಾ” ಹಾಡನ್ನು ರಿಲೀಸ್ ಮಾಡಲಾಗಿತ್ತು. ಜವಾರಿ ಶೈಲಿಯ ಸಾಹಿತ್ಯವನ್ನು ಹೊಂದಿರುವ ಹಾಡು ಕೇಳಲು ಮಜಾವಾಗಿದೆ.


“ಸಿಂಗಲ್ ಕಣ್ಣಾ ಹಾರಸ್ತಿ.. ಡಬ್ಬಲ್ ಹಾರ್ನಾ ಬಾರಸ್ತಿ..” ಹಾಡು ಈಗ ಸಖತ್ ಸದ್ದು ಮಾಡುತ್ತಿದೆ. ಬರೋಬ್ಬರಿ 10 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಹಾಡನ್ನು ಶಿವು ಭೇರ್ಗಿ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿರುವ ಈ ಜವಾರಿ ಹಾಡಿಗೆ ಭೂಷಣ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಕೃಷ್ಣ ನಾಯ್ಕರ್ ಛಾಯಾಗ್ರಹಣ ಮತ್ತು ಯುಡಿವಿ ವೆಂಕಿ ಸಂಕಲನದಲ್ಲಿ ಹಾಡು ಸೊಗಸಾಗಿ ಮೂಡಿ ಬಂದಿದ್ದು, ಹಾಡಿನಲ್ಲಿ ಬಿರಾದಾರ್ ಜೊತೆ ನೀತಾ ಮೈಂರ್ಗಿ ಹೆಜ್ಜೆ ಹಾಕಿದ್ದಾರೆ.


ಅಮ್ಮ ಟಾಕೀಸ್ ಬಾಗಲಕೋಟ ಸಂಸ್ಥೆಯ ರತ್ನಮಾಲಾ ಬಾದರದಿನ್ನಿ ಹಣ ಹೂಡಿಕೆಯಲ್ಲಿನ ಈ ಚಿತ್ರಕ್ಕೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಎಂಬಿಬ್ಬರು ಜಂಟಿ ನಿರ್ದೇಶಕರು.
ಇಳಿ ವಯಸ್ಸಿನಲ್ಲಿ ಬಿಂದಾಸ್ ಆಗಿ ಕುಣಿದಿರುವ ವೈಜನಾಥ್ ಬಿರಾದಾರ್ ಎನರ್ಜಿ ಕಂಡು ಕನ್ನಡಿಗರು ಫುಲ್ ಖುಷ್ ಆಗಿದ್ದಾರೆ.



