ಇಂದ್ರಜಿತ್ ಅವರ 3.0 ಚಿತ್ರ ಇದೇ ಅಕ್ಟೋಬರ್ 14 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ.
ಚಿತ್ರದ ಪ್ರಚಾರದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ. ಚಿತ್ರದ ಬಗ್ಗೆ ಮಾತಾನಾಡಿರುವ ಚಿತ್ರ ತಂಡ, ಒಬ್ಬ ಯುವತಿ, ಮೂವರು ಯುವಕರ ಸುತ್ತ ಸಾಗುವ ಕ್ರೈಂ ಥ್ರಿಲ್ಲರ್ ಕಥಾ ಹಂದರವುಳ್ಳ ಚಿತ್ರವಿದು. ಕೊಲೆಯೊಂದರ ತನಿಖೆಯ ಸುತ್ತ ಚಿತ್ರ ಕಥೆ ಸಾಗುತ್ತದೆ. ಅ.14 ರಂದು ಚಿತ್ರ ಬಿಡುಗಡೆ ಆಗಲಿದೆ ಎಲ್ಲರೂ ನೋಡಿ ಹಾರೈಸಿ ಎಂದರು.


ಚಿತ್ರದಲ್ಲಿ ಯುವ ಪ್ರತಿಭೆಗಳಾದ ಶಶಿಕರಣ್, ಶಿವರಾಜ್, ಲೋಹಿತ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರೇ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ.
ಈಗಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.



